15 questions
ರಾಶಿಯನ್ನು ಹೊಂದಿರುವ ಮತ್ತು ಸ್ಥಳವನ್ನು ಆಕ್ರಮಿಸಬಲ್ಲ ಯಾವುದೇ ವಸ್ತುವನ್ನು ಹೀಗೆಂದು ಕರೆಯುತ್ತಾರೆ
ದ್ರವ
ದ್ರವ್ಯ
ಘನ
ಅನಿಲ
ಸರಿಯೋ ತಪ್ಪೋ ತಿಳಿಸಿ.
ದ್ರವ್ಯದ ಕಣಗಳ ಮಧ್ಯೆ ಖಾಲಿ ಸ್ಥಳ ಅವಕಾಶ ಇರುವುದಿಲ್ಲ.
ಸರಿಯಾಗಿದೆ.
ತಪ್ಪಾಗಿದೆ.
ಎರಡು ಬೇರೆ ಬೇರೆ ದ್ರವ್ಯದ ಕಣಗಳು ಪರಸ್ಪರ ಆಂತರಿಕವಾಗಿ ತಮ್ಮಷ್ಟಕ್ಕೆ ತಾವೇ ಮಿಶ್ರಣ ಹೊಂದುವುದನ್ನು ಹೀಗೆನ್ನುವರು
ವಿಸರಣೆ
ಪ್ರಸರಣ
ಮಿಶ್ರಣ
ಘರ್ಷಣೆ
ಆಕಾರ, ಸುತ್ತಳತೆ ಮತ್ತು ಗಾತ್ರವನ್ನು ಹೊಂದಿರುವ ವಸ್ತುಗಳು
ಘನ ವಸ್ತುಗಳು
ದ್ರವ ವಸ್ತುಗಳು
ಅನಿಲಗಳು
ಮೇಲಿನ ಎಲ್ಲವೂ
ಇವುಗಳಿಗೆ ನಿರ್ದಿಷ್ಟ ಆಕಾರವಿಲ್ಲ ಆದರೆ ಗಾತ್ರವಿದೆ.
ಘನ ವಸ್ತುಗಳು
ದ್ರವ ವಸ್ತುಗಳು
ಅನಿಲಗಳು
ಮೇಲಿನ ಎಲ್ಲವೂ
LPG ಯ ವಿಸ್ತೃತ ರೂಪ
ಸಂಪೀಡಿತ ನೈಸರ್ಗಿಕ ಅನಿಲ
ದ್ರವಿತ ಪೆಟ್ರೋಲಿಯಂ ಅನಿಲ
ಉತ್ತಮ ದ್ರವಿತ ಅನಿಲ
ಕಡಿಮೆ ಸಾಮರ್ಥ್ಯ ಅನಿಲ
CNG ಯ ವಿಸ್ತೃತ ರೂಪ
ಸಂಪೀಡಿತ ನೈಸರ್ಗಿಕ ಅನಿಲ
ದ್ರವಿತ ಪೆಟ್ರೋಲಿಯಂ ಅನಿಲ
ಉತ್ತಮ ದ್ರವಿತ ಅನಿಲ
ಕಡಿಮೆ ಸಾಮರ್ಥ್ಯ ಅನಿಲ
ಇವುಗಳಲ್ಲಿ ಯಾವ ಕಣಗಳ ವೇಗ ಹೆಚ್ಚಾಗಿರುತ್ತದೆ
ತಂಪಾಗಿರುವ ವಸ್ತುವಿನ ಕಣಗಳು
ಹಿಮದ ಪದದಲ್ಲಿರುವ ವಸ್ತುವಿನ ಕಣಗಳು
ಬಿಸಿಯಾಗಿರುವ ಆಹಾರದ ವಾಸನೆ ಕಣಗಳು
ಮೇಲಿನ ಯಾವುದೂ ಅಲ್ಲ
ಮಂಜುಗಡ್ಡೆಯ ದ್ರವನ ಬಿಂದು
293.16 K
233.2 K
273.16 K
289.3 K
ನೀರಿನ ಕುದಿಯುವ ಬಿಂದು
355 K
373 K
422 K
233 K
ಘನ --> ದ್ರವ --> ಅನಿಲ
ಹೀಗೆ ವಸ್ತುಗಳ ಸ್ಥಿತಿ ಬದಲಾವಣೆ ಯಾಗಬೇಕಾದರೆ ಏನು ಮಾಡಬೇಕು?
ತಾಪವನ್ನು ಕಡಿಮೆ ಮಾಡುತ್ತಾ ಹೋಗಬೇಕು
ತಾಪವನ್ನು ಹೆಚ್ಚು ಮಾಡುತ್ತಾ ಹೋಗಬೇಕು
ಸ್ಥಿರವಾದ ತಾಪಮಾನವನ್ನು ನೀಡಬೇಕು
ತಾಪದಿಂದ ಯಾವುದೇ ಬದಲಾವಣೆಯಾಗುವುದಿಲ್ಲ
ಈ ಕೆಳಗಿನ ವಸ್ತುಗಳಲ್ಲಿ ಯಾವುದು ಉತ್ಪತನ ಕ್ಕೆ ಉದಾಹರಣೆ ಯಾಗಿದೆ.
ಮೇಣದಬತ್ತಿ
ಕರ್ಪೂರ
ಕೊಬ್ಬರಿ ಎಣ್ಣೆ
ಪೆಟ್ರೋಲ್
ಇದನ್ನು ಶುಷ್ಕ ಮಂಜುಗಡ್ಡೆ ಎನ್ನುವರು
ಘನ ಕಾರ್ಬನ್ ಡೈಯಾಕ್ಸೈಡ್
ದ್ರವ ನೈಟ್ರೋಜನ್
ದ್ರವೀಕರಿಸಿದ ಪೆಟ್ರೋಲಿಯಂ
ಸಂಕುಚಿತ ಸೀಮೆಎಣ್ಣೆ
ಒಂದು ದ್ರವವು ಯಾವುದೇ ತಾಪದಲ್ಲಿ ಅದರ ಕುದಿಬಿಂದು ವನ್ನು ತಲುಪುವ ಮೊದಲೇ ಆವಿಯಾಗುವ ವಿದ್ಯಮಾನಕ್ಕೆ ಹೀಗೆನ್ನುವರು.
ವಿಸರಣೆ
ಸಾಂದ್ರೀಕರಣ
ಅನಿಲ ವಿನಿಮಯ
ಬಾಷ್ಪೀಕರಣ
ಬಾಷ್ಪೀಕರಣ ಯಾವಾಗ ಹೆಚ್ಚಾಗುತ್ತದೆ?
ಮೇಲ್ಮೈ ವಿಸ್ತೀರ್ಣ ಹೆಚ್ಚಾದಾಗ
ತಾಪಮಾನ ಹೆಚ್ಚಾದಾಗ
ಆರ್ದ್ರತೆಯ ಪ್ರಮಾಣ ಇಳಿಕೆ ಆದಾಗ
ಮೇಲಿನ ಎಲ್ಲವೂ ಸರಿ