No student devices needed. Know more
30 questions
ಯಾವುದೇ ಒಂದು ಜೀವಿ ಜೀವಂತವಾಗಿದೆ ಎಂದು ಹೇಳಲು ಈ ಕೆಳಗಿನ ಯಾವ ಅಂಶ/ ಅಂಶಗಳು ಕಾರಣ
ಬೆಳವಣಿಗೆ
ಉಸಿರಾಟ
ರಕ್ತ ಪರಿಚಲನೆ
ಮೇಲಿನ ಎಲ್ಲವೂ
ಜೀವಿಗಳ ದೇಹದಲ್ಲಿ ಉತ್ಪತ್ತಿಯಾದ ತ್ಯಾಜ್ಯ ವಸ್ತುಗಳನ್ನು ಹೊರಹಾಕುವ ಕ್ರಿಯೆಗೆ ಹೀಗೆನ್ನುವರು
ವಿಸರ್ಜನೆ
ಜೀರ್ಣಕ್ರಿಯೆ
ರಕ್ತ ಪರಿಚಲನೆ
ಉಸಿರಾಟ
ಜೀವಿಗಳ ಜೈವಿಕ ಪ್ರಕ್ರಿಯೆ ನಿರಂತರವಾಗಿ ಇಡಲು ಅಗತ್ಯವಾದ ಆಹಾರವನ್ನು ತೆಗೆದುಕೊಳ್ಳುವ ಪ್ರಕ್ರಿಯೆಗೆ ಹೀಗೆನ್ನುವರು
ವಿಸರ್ಜನೆ
ಉಸಿರಾಟ
ರಕ್ತ ಪರಿಚಲನೆ
ಪೋಷಣೆ
ಪರಪೋಷಕ ಜೀವಿಗಳು ಇವುಗಳ ಸಹಾಯದಿಂದ ಆಹಾರದಲ್ಲಿನ ಸಂಕೀರ್ಣ ಘಟಕಗಳನ್ನು ಸರಳ ಘಟಕಗಳನ್ನಾಗಿ ಪರಿವರ್ತಿಸುತ್ತವೆ
ಶಿಲಿಂದ್ರ
ಬ್ಯಾಕ್ಟೀರಿಯ
ವೈರಸ್
ಕಿಣ್ವ
ಇವುಗಳಲ್ಲಿ ಯಾವ ಜೀವಿ ತನ್ನ ಆಹಾರವನ್ನು ತಾನೇ ತಯಾರಿಸಿ ಕೊಳ್ಳುತ್ತದೆ
ಕಪ್ಪೆ
ಮಿಡತೆ
ಹುಲ್ಲು
ಇರುವೆ
ದ್ಯುತಿ ಸಂಶ್ಲೇಷಣೆ ಕ್ರಿಯೆಯು ಇವುಗಳಲ್ಲಿ ಕಂಡುಬರುತ್ತದೆ
ಎಲ್ಲಾ ಹಸಿರು ಎಲೆಗಳನ್ನು ಹೊಂದಿರುವ ಸಸ್ಯಗಳಲ್ಲಿ
ಎಲ್ಲಾ ಪರಾವಲಂಬಿ ಜೀವಿಗಳಲ್ಲಿ
ನೆಲದ ಮೇಲೆ ವಾಸಿಸುವ ಪ್ರಾಣಿಗಳಲ್ಲಿ
ಜಲಚರಗಳಲ್ಲಿ
ದ್ಯುತಿ ಸಂಶ್ಲೇಷಣೆ ಕ್ರಿಯೆಯ ಅಂತಿಮ ಉತ್ಪನ್ನ ಎಂದರೆ
ಸಂಶ್ಲೇಷಿತ ವಸ್ತುಗಳು
ದ್ಯುತಿ ಫೈಬರ್
ಪಿಷ್ಟ (ಕಾರ್ಬೋಹೈಡ್ರೇಟ್)
ದ್ಯುತಿ ತಂತುಗಳು
ಈ ಸಮೀಕರಣವನ್ನು ಪೂರ್ಣಗೊಳಿಸಿ
6CO2 + 12H2O --->
C6H12O6 + 6O2 + 6H2O
C6H12O6 + 3O2 + 3H2O
2C6H12O6 + 2O2 + 3H2O
ಯಾವುದು ಅಲ್ಲ
ಸಸ್ಯಗಳು ತಮ್ಮ ಪೋಷಣೆಗೆ ಅಗತ್ಯವಾದ ನೈಟ್ರೋಜನ್ ಅನ್ನು ಈ ರೂಪದಲ್ಲಿ ಪಡೆದುಕೊಳ್ಳುತ್ತವೆ
ನೈಟ್ರೋಜನ್ ಡೈಆಕ್ಸೈಡ್
ನೈಟ್ರಿಕ್ ಆಮ್ಲ
ನೈಟ್ರೇಟ್ ಅಥವಾ ನೈ ಟ್ರೈಟ್
ನೈಟ್ರೋಜನ್ ಮೊನಾಕ್ಸೈಡ್
ಸಸ್ಯದ ಎಲೆಗಳಲ್ಲಿರುವ ಇವು ನೀರು ಮತ್ತು ಅನಿಲಗಳ ವಿನಿಮಯಕ್ಕೆ ಸಹಾಯಕ ವಾಗಿರುವುದರಿಂದ ಇವುಗಳನ್ನು ಕಾವಲು ಜೀವಕೋಶಗಳು ಎಂತಲೂ ಕರೆಯುತ್ತಾರೆ
ಪತ್ರಹರಿತ್ತು
ಪತ್ರರಂಧ್ರ
ಪತ್ರಶೀಲತೆ
ಕೋಶಬತ್ತಿ
ಪರಪೋಷಕ ಜೀವಿಗಳು ಎಂದರೆ
ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವುದು
ತಮ್ಮ ಆಹಾರವನ್ನು ಇತರೆ ಜೀವಿಗಳ ಮೂಲಕ ತರಿಸಿಕೊಳ್ಳುವುದು
ತಮ್ಮ ಆಹಾರಕ್ಕಾಗಿ ಇತರೆ ಜೀವಿಗಳನ್ನು ಅವಲಂಬಿಸುವುದು
ತಮ್ಮ ಆಹಾರವನ್ನು ಇತರರಿಗೆ ಪೂರೈಕೆ ಮಾಡುವುದು
ಈ ಜೀವಿಯು ಇತರೆ ಜೀವಿಯನ್ನು ಕೊಲ್ಲದೇ ತನ್ನ ಪೋಷಣೆಯನ್ನು ಪಡೆದುಕೊಳ್ಳುತ್ತದೆ
ನಕ್ಷತ್ರ ಮೀನು
ಬೆಕ್ಕು
ಮೊಲ
ಜಿಗಣೆ
ಈ ಜೀವಿಯು ತನ್ನ ತಾತ್ಕಾಲಿಕ ಬೆರಳಿನಂತಹ ಜೀವಕೋಶದ ಮೇಲ್ಮೈ ಹೊರಚಾಚಿಕೆಗಳನ್ನು ಬಳಸಿ ಆಹಾರವನ್ನು ಪಡೆದುಕೊಳ್ಳುತ್ತದೆ
ಅಮೀಬಾ
ಯೂಗ್ಲಿನಾ
ಪ್ಯಾರಮೀಸಿಯಂ
ಬ್ಯಾಕ್ಟೀರಿಯ
ಈ ಜೀವಿಯು ತನ್ನ ಕಶಾಂಗ ಚಲನೆಯ ಮೂಲಕ ಆಹಾರವನ್ನು ಪಡೆದುಕೊಳ್ಳುತ್ತದೆ
ಅಮೀಬಾ
ಯೂಗ್ಲಿನಾ
ಪ್ಯಾರಮೀಸಿಯಂ
ಬ್ಯಾಕ್ಟೀರಿಯ
ನಮ್ಮ ಬಾಯಿಯ ಲಾಲಾರಸ ದಲ್ಲಿರುವ ಈ ಕಿಣ್ವವು ಸಂಕೀರ್ಣವಾಗಿರುವ ಪಿಷ್ಟವನ್ನು ವಿಭಜಿಸಿ ಸರಳ ಅಣುವಾದ ಸಕ್ಕರೆಯನ್ನಾಗಿ ಪರಿವರ್ತಿಸುತ್ತದೆ
ಪೆಪ್ಸಿನ್
ಅಮೈಲೇಸ್
ಟ್ರಿಪ್ಸಿನ್
ಲೈಪೇಸ್
ಈ ಕೆಳಗಿನವುಗಳಲ್ಲಿ ಯಾವುದು ಅವಾಯುವಿಕ ಉಸಿರಾಟಕ್ಕೆ ಉದಾಹರಣೆಯಾಗಿದೆ
ಶ್ವಾಸಕೋಶದಲ್ಲಿ ನ ಜೀವಕೋಶಗಳು
ಕಣ್ಣಿನಲ್ಲಿನ ಜೀವಕೋಶಗಳು
ಯೀಸ್ಟ್ ನಲ್ಲಿನ ಜೀವಕೋಶಗಳು
ಮೆದುಳಿನಲ್ಲಿನ ಜೀವಕೋಶಗಳು
ಈ ಅಣುಗಳನ್ನು ಜೀವಕೋಶದ ಎಲ್ಲಾ ಚಟುವಟಿಕೆಗಳಿಗೆ ಇಂಧನವಾಗಿ ಬಳಸಲ್ಪಡುತ್ತದೆ
DAP
mRNA
ATP
DNA
ನೆಲ ವಾಸಿಗಳಿಗೆ ಹೋಲಿಸಿದರೆ ಜಲಚರ ಪ್ರಾಣಿಗಳಲ್ಲಿ ಉಸಿರಾಟದ ವೇಗ ಹೆಚ್ಚಾಗಿರುತ್ತದೆ ಕಾರಣ
ಅವುಗಳಿಗೆ ಎಲ್ಲಾ ರೀತಿಯ ಜೀವಕೋಶಗಳು ಇರುವುದಿಲ್ಲ
ಅವುಗಳು ಶ್ವಾಸಕೋಶಗಳನ್ನು ಹೊಂದಿರುವುದಿಲ್ಲ
ವಾತಾವರಣದಲ್ಲಿನ ಆಮ್ಲಜನಕದ ಪ್ರಮಾಣಕ್ಕಿಂತ ನೀರಿನಲ್ಲಿ ಕಡಿಮೆ ಪ್ರಮಾಣದ ಆಮ್ಲಜನಕ ಕರಗಿರುತ್ತದೆ
ನೆಲ ವಾಸಿಗಳಿಗೆ ಹೋಲಿಸಿದರೆ ಜಲಚರಗಳ ರಕ್ತದ ಒತ್ತಡ ತುಂಬಾ ಹೆಚ್ಚಾಗಿರುವುದರಿಂದ
ಮಾನವರ ಶ್ವಾಸಕೋಶದಲ್ಲಿ ಕಂಡುಬರುವ ಬಲೂನಿನಂತಹ ರಚನೆಗಳಿಗೆ ಹೀಗೆನ್ನುವರು
ಕವಾಟ ಗಳು
ಹೃತ್ಕರ್ಣ ಗಳು
ಗಾಳಿ ಗೂಡುಗಳು
ಬ್ರಾಂಕೈ ಗಳು
ಈ ಕೆಳಗಿನ ಯಾವ ಜೀವಕೋಶವು ದೇಹದಲ್ಲಿನ ಎಲ್ಲಾ ಜೀವಕೋಶಗಳಿಗೆ ಆಮ್ಲಜನಕವನ್ನು ಪೂರೈಸುತ್ತದೆ
ಬಿಳಿ ರಕ್ತ ಕಣ
ಮೈಟೋಕಾಂಡ್ರಿಯಾ
ಹಿಮೋಗ್ಲೋಬಿನ್
ಕಿರುತಟ್ಟೆ
ಶಾಸಕೋಶ ಗಳಿಂದ ಬಂದ ಶುದ್ಧ ರಕ್ತವು ಮೊದಲಿಗೆ ಹೃದಯದ ಯಾವ ಭಾಗಕ್ಕೆ ಪ್ರವೇಶಿಸುತ್ತದೆ
ಎಡ ಹೃತ್ಕರ್ಣ
ಬಲ ಹೃತ್ಕರ್ಣ
ಎಡ ಹೃತ್ಕಕ್ಷಿ
ಬಲ ಹೃತ್ಕಕ್ಷಿ
ಕಶೇರುಕಗಳಲ್ಲಿ ರಕ್ತವು ಒಂದು ಸಂಪೂರ್ಣ ಪರಿಚಲನೆಗೆ ಹೃದಯವನ್ನು ಎರಡು ಬಾರಿ ಹಾದು ಹೋಗಬೇಕು. ಇದನ್ನು ಈ ಹೆಸರಿನಿಂದ ಕರೆಯುವರು
ದ್ವಿ ರಕ್ತಪರಿಚಲನೆ
ಪುಪ್ಪಸಕ ಪರಿಚಲನೆ
ಇಮ್ಮಡಿ ಪರಿಚಲನೆ
ಕ್ರಿಯಾತ್ಮಕ ಪರಿಚಲನೆ
ಇವುಗಳಿಂದ ರಕ್ತವು ಹೆಪ್ಪುಗಟ್ಟಲು ಸಹಾಯಕವಾಗಿದೆ
ಬಿಳಿ ರಕ್ತ ಕಣ
ಮೈಟೋಕಾಂಡ್ರಿಯಾ
ಹಿಮೋಗ್ಲೋಬಿನ್
ಕಿರುತಟ್ಟೆ
ಈ ಅಂಗಾಂಶವು ಸಸ್ಯದ ಎಲೆಗಳಲ್ಲಿ ತಯಾರಾದ ಆಹಾರವನ್ನು ಸಸ್ಯದ ಇತರೆ ಭಾಗಗಳಿಗೆ ಸಾಗಿಸುತ್ತದೆ
ಕ್ಸೈಲಂ
ಫ್ಲೋಯಂ
ಸಂಗಾತಿ ಜೀವಕೋಶ
ಜರಡಿ ನಾಳ
ಗಾಳಿಗೆ ತೆರೆದ ಸಸ್ಯದ ಭಾಗಗಳಿಂದ ನೀರು ಆವಿ ರೂಪದಲ್ಲಿ ನಷ್ಟವಾಗುವುದನ್ನು ಹೀಗೆನ್ನುವರು
ಆವೀಕರಣ
ಭಾಷ್ಪವಿಸರ್ಜನೆ
ಸ್ಥಾನಾಂತರ
ಜಲಚಕ್ರ
ರಕ್ತವನ್ನು ಹೋಲುವ ವರ್ಣರಹಿತ ದ್ರವ
ಬಿಳಿ ರಕ್ತ ಕಣ
ದುಗ್ಧರಸ
ಹಿಮೋಗ್ಲೋಬಿನ್
ಕಿರುತಟ್ಟೆ
ಮೂತ್ರಕೋಶದ ರಚನಾತ್ಮಕ ಹಾಗೂ ಕಾರ್ಯತ್ಮಕ ಘಟಕಗಳಿಗೆ ಹೀಗೆನ್ನುವರು
ಹೆನಲೆ ಕುಣಿಕೆ
ಬೌಮನ್ ನ ಕೋಶ
ನೆಫ್ರಾನ್
ಗ್ಲಾಮರುಲಸ್
ದ್ಯುತಿಸಂಶ್ಲೇಷಣೆ ಕ್ರಿಯೆಯಲ್ಲಿ ಉತ್ಪತ್ತಿಯಾದ ಈ ಅನಿಲವು ಸಸ್ಯಕ್ಕೆ ಒಂದು ವ್ಯರ್ಥ ಅನಿಲವಾಗಿದೆ
ಕಾರ್ಬನ್ ಡೈಆಕ್ಸೈಡ್
ನೈಟ್ರೋಜನ್ ಆಕ್ಸೈಡ್
ಕಾರ್ಬನ್ ಮೊನಾಕ್ಸೈಡ್
ಆಕ್ಸಿಜನ್
ಸಸ್ಯದ ತ್ಯಾಜ್ಯ ಪದಾರ್ಥಗಳಾದ ಅಂಟು ಮತ್ತು ರಾಳಗಳು ಸಸ್ಯದ ಈ ಅಂಗಾಂಶಗಳಲ್ಲಿ ಸಂಗ್ರಹವಾಗಿರುತ್ತವೆ
ಹಳೆಯ ಕ್ಸೈಲಂ ಅಂಗಾಂಶಗಳಲ್ಲಿ
ಫ್ಲೋಯಂ ಅಂಗಾಂಶಗಳಲ್ಲಿ
ಸಂಗಾತಿ ಜೀವಕೋಶಗಳಲ್ಲಿ
ಜರಡಿ ನಾಳಗಳಲ್ಲಿ
ಮಾನವರ ಮೂತ್ರಪಿಂಡಗಳಲ್ಲಿ ರಕ್ತದಲ್ಲಿನ ಈ ನೈಟ್ರೋಜನ್ ಯುಕ್ತ ತ್ಯಾಜ್ಯ ಪದಾರ್ಥಗಳನ್ನು ಹೊರತೆಗೆಯಲಾಗುತ್ತದೆ
ಯೂರಿಯಾ ಅಥವಾ ಯೂರಿಕ್ ಆಮ್ಲ
ಫಾಸ್ಫಾರಿಕ್ ಆಮ್ಲ
ಗಂಧಕಾಮ್ಲ
ಹೈಡ್ರೋಕ್ಲೋರಿಕ್ ಆಮ್ಲ
Explore all questions with a free account