No student devices needed. Know more
15 questions
ಒಂದು ರಾಸಾಯನಿಕ ಕ್ರಿಯೆ ನಡೆದಿದೆ ಎಂದು ಅರ್ಥೈಸಬೇಕಾದರೆ ಅಲ್ಲಿ
ವಸ್ತುವಿನ ಸ್ಥಿತಿ ಬದಲಾವಣೆಯಾಗಿರಬೇಕು
ವಸ್ತುವಿನ ಬಣ್ಣದಲ್ಲಿ ಬದಲಾವಣೆಯಾಗಿರಬೇಕು
ವಸ್ತುವಿನ ತಾಪದಲ್ಲಿ ಬದಲಾವಣೆಯಾಗಿರಬೇಕು
ಈ ಮೇಲಿನ ಎಲ್ಲವೂ
ಪ್ರತಿವರ್ತಕ ಅಥವಾ ಉತ್ಪನ್ನಗಳಿಗೆ ಸಂಬಂಧಿಸಿದಂತೆ (s), (l), (g), ಹಾಗೂ (aq) ಸಂಕೇತಗಳ ಅರ್ಥವು ಕ್ರಮವಾಗಿ
ಘನ ದ್ರವ ಅನಿಲ ಹಾಗೂ ಜಲೀಯ
ಜಲೀಯ ಘನ ದ್ರವ ಹಾಗೂ ಅನಿಲ
ದ್ರವ ಜಲೀಯ ಘನ ಹಾಗೂ ಅನಿಲ
ಅನಿಲ ಘನ ದ್ರವ ಹಾಗೂ ಜಲೀಯ
ಯಾವಾಗ ರಾಸಾಯನಿಕ ಕ್ರಿಯೆಯಲ್ಲಿ ಎರಡು ಅಥವಾ ಹೆಚ್ಚು ಪ್ರತಿವರ್ತಕಗಳು ಸೇರಿ ಒಂದೇ ಉತ್ಪನ್ನ ಉಂಟಾದರೆ ಅಂತಹ ರಾಸಾಯನಿಕ ಕ್ರಿಯೆಯನ್ನು ಹೀಗೆ ಕರೆಯುತ್ತಾರೆ
ವಿಭಜನೆ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
ಸಯೋಗ ಕ್ರಿಯೆ
ದ್ವಿ ಸ್ಥಾನ ಪಲ್ಲಟ ಕ್ರಿಯೆ
ಒಂದು ಪ್ರತಿವರ್ತಕ ದಿಂದ ಎರಡು ಅಥವಾ ಎರಡಕ್ಕಿಂತ ಹೆಚ್ಚು ಉತ್ಪನ್ನಗಳು ಉತ್ಪತ್ತಿಯಾದರೆ ಅಂತಹ ರಾಸಾಯನಿಕ ಕರೆಯನ್ನು ಹೀಗೆನ್ನುವರು
ಸಂಯೋಗ ಕ್ರಿಯೆ
ದ್ವಿಸ್ಥಾನಪಲ್ಲಟ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
ವಿಭಜನೆ ಕ್ರಿಯೆ
ಈ ರಾಸಾಯನಿಕ ಸಮೀಕರಣವನ್ನು ಪೂರ್ಣಗೊಳಿಸಿ CaCO3 (s) →
CaCO3 (s)
CO2 (g)
CaO (s) + CO2 (g)
Ca (s) + CO3 (g)
ಯಾವ ರಾಸಾಯನಿಕ ಕ್ರಿಯೆಯಲ್ಲಿ ಉಷ್ಣವು ಹೀರಲ್ಪಡುತ್ತದೆಯೋ ಅಂತಹ ರಾಸಾಯನಿಕ ಕ್ರಿಯೆಯನ್ನು ಹೀಗೆನ್ನುವರು
ಬಹಿರುಷ್ಣಕ ಕ್ರಿಯೆ
ಅಂತರುಷ್ಣಕ ಕ್ರಿಯೆ
ಮೇಲಿನ ಎಲ್ಲವೂ ಸರಿ
ಮೇಲಿನ ಎಲ್ಲವೂ ತಪ್ಪು
ಯಾವ ರಾಸಾಯನಿಕ ಕ್ರಿಯೆಯಲ್ಲಿ ಉಷ್ಣವು ವಾತಾವರಣಕ್ಕೆ ಬಿಡುಗಡೆಯಾದರೆ ಅಂತಹ ರಾಸಾಯನಿಕ ಕ್ರಿಯೆಯನ್ನು ಹೀಗೆನ್ನುವರು
ಬಹಿರುಷ್ಣಕ ಕ್ರಿಯೆ
ಅಂತರುಷ್ಣಕ ಕ್ರಿಯೆ
ಮೇಲಿನ ಎಲ್ಲವೂ ಸರಿ
ಮೇಲಿನ ಎಲ್ಲವೂ ತಪ್ಪು
ಯಾವ ರಾಸಾಯನಿಕ ಕ್ರಿಯೆಯಲ್ಲಿ ಪ್ರತಿವರ್ತಕಗಳ ನಡುವೆ ಅಯಾನುಗಳ ವಿನಿಮಯ ನಡೆಯುತ್ತದೆಯೋ ಅಂತಹ ರಾಸಾಯನಿಕ ಕ್ರಿಯೆಯನ್ನು ಹೀಗೆನ್ನುವರು
ಸಂಯೋಗ ಕ್ರಿಯೆ
ದ್ವಿಸ್ಥಾನಪಲ್ಲಟ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
ವಿಭಜನೆ ಕ್ರಿಯೆ
ಯಾವುದೇ ರಾಸಾಯನಿಕ ಕ್ರಿಯೆಯಲ್ಲಿ ತಳಭಾಗದಲ್ಲಿ ಸಂಗ್ರಹವಾಗುವ ಜಲ ವಿಲೀನಗೊಳ್ಳದ ಬಿಳಿಯ ವಸ್ತುವನ್ನು ಹೀಗೆನ್ನುವರು
ಕ್ರಿಯಾವರ್ಧಕ
ಉತ್ಕರ್ಷಕ
ಪ್ರಕ್ಷೇಪ
ಮೇಲಿನ ಎಲ್ಲವೂ
ಉತ್ಕರ್ಷಣೆ ಕ್ರಿಯೆಯೆಂದರೆ
ಆಕ್ಸಿಜನ್ ಅನ್ನು ಬಿಡುಗಡೆ ಮಾಡುವುದು ಅಥವಾ ಹೈಡ್ರೋಜನ್ ಅನ್ನು ಪಡೆಯುವುದು
ಆಕ್ಸಿಜನ್ ಅನ್ನು ಪಡೆದುಕೊಳ್ಳುವುದು ಅಥವಾ ಹೈಡ್ರೋಜನ್ ಅನ್ನು ಕಳೆದುಕೊಳ್ಳುವುದು
ಗಂಧಕದ ಡೈ ಆಕ್ಸೈಡ್ ನೊಂದಿಗೆ ವರ್ತಿಸುವುದು
ಕಾರ್ಬನ್ ಡೈಯಾಕ್ಸೈಡ್ ಅನ್ನು ಬಿಡುಗಡೆ ಮಾಡುವುದು
ಚಿಪ್ಸ್ ತಯಾರಕರು ಚಿಪ್ಸ್ ಉತ್ಕರ್ಷಣೆ ಗೊಳ್ಳುವುದನ್ನು ತಡೆಯಲು ಚಿಪ್ಸ್ ನ ಪೊಟ್ಟಣದಲ್ಲಿ ಈ ಅನಿಲವನ್ನು ತುಂಬುತ್ತಾರೆ
ಹೈಡ್ರೋಜನ್ ಅನಿಲ
ಕಾರ್ಬನ್ ಡೈಯಾಕ್ಸೈಡ್ ಅನಿಲ
ನೈಟ್ರೋಜೆನ್ ಅನಿಲ
ಸಲ್ಫರ್ ಡೈಆಕ್ಸೈಡ್ ಅನಿಲ
ಲೋಹಗಳು ತನ್ನ ಸುತ್ತಲಿರುವ ತೇವಾಂಶ ಮತ್ತು ಆಮ್ಲಗಳಿಂದ ಆಕ್ರಮಿಸಲ್ಪಟ್ಟು ಹಾನಿಗೊಳಗಾಗುವ ಕ್ರಿಯೆಯನ್ನು ಹೀಗೆನ್ನುವರು
ಕಮಟುವಿಕೆ
ನಶಿಸುವಿಕೆ
ಕ್ರಿಯಾ ವರ್ಧನೆ
ಲೋಹೋದ್ಧರಣ
ಇದು ಯಾವ ಪ್ರಕಾರದ ರಾಸಾಯನಿಕ ಕ್ರಿಯೆ ಯಾಗಿದೆ 2H2 + O2 --> 2H2O
ಸಂಯೋಗ ಕ್ರಿಯೆ
ದ್ವಿಸ್ಥಾನಪಲ್ಲಟ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
ವಿಭಜನೆ ಕ್ರಿಯೆ
ಈ ರಾಸಾಯನಿಕ ಕ್ರಿಯೆಯನ್ನು ಸಮದೂಗಿಸಿ Mg + O2 --> MgO
Mg + O2 --> MgO2
2 Mg + O2 -->2 MgO
2 Mg + 2 O2 -->2 MgO
3 Mg + O2 --> 3 MgO
ರಾಸಾಯನಿಕ ಕ್ರಿಯೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ
ರಾಸಾಯನಿಕ ಕ್ರಿಯೆಯಲ್ಲಿ ರಾಶಿಯನ್ನು ಸೃಷ್ಟಿಸುವುದಾಗಲಿ ಲಯಗೊಳಿಸುವುದಾಗಲಿ ಸಾಧ್ಯವಿಲ್ಲ
ರಾಶಿಯನ್ನು ಸೃಷ್ಟಿಸಬಹುದು ಹಾಗೂ ಲಯಗೊಳಿಸಬಹುದು
ರಾಸಾಯನಿಕ ಕ್ರಿಯೆಯಲ್ಲಿ ಪ್ರತಿವರ್ತಕ ಗಳು ಉತ್ಪನ್ನಗಳಿಗೆ ಸಮವಾಗಿರುವುದಿಲ್ಲ
ರಾಸಾಯನಿಕ ಕ್ರಿಯೆಯಲ್ಲಿ ರಾಶಿಯನ್ನು ಪರಿಗಣಿಸುವ ಅಗತ್ಯತೆ ಇರುವುದಿಲ್ಲ
Explore all questions with a free account