No student devices needed. Know more
20 questions
ಕೊಟ್ಟಿರುವ ಚಿತ್ರದಲ್ಲಿ M ದರ್ಪಣ ವಾಗಿದೆ, P ವಸ್ತುವಾಗಿದೆ ಮತ್ತು Q ದರ್ಪಣದಿಂದ ಉಂಟಾದ P ನ ದೊಡ್ಡ ಪ್ರತಿಬಿಂಬವಾಗಿದೆ ಹಾಗಾದರೆ M ದರ್ಪಣವು
ನಿಮ್ನ ದರ್ಪಣ
ಪೀನ ದರ್ಪಣ
ಸಮತಲ ದರ್ಪಣ
ಸಮತಲ ಪೀನ ದರ್ಪಣ
ಲವಣಗಳನ್ನು ಅವುಗಳ ಸಾಮಾನ್ಯ ಹೆಸರಿನೊಂದಿಗೆ ಹೊಂದಿಸಿರಿ
ಅ MgSO4.7H2O ಜಿಪ್ಸಂ
ಬಿ CUSO4.5H2O ಹಸಿರು ವಿಟ್ರಿಯಾಲ್
ಸಿ FeSO4.7H2Oನೀಲಿ ವಿಟ್ರಿಯಾಲ್
ಡಿ CaSO4.2H2O ಎಪ್ಸo
iv, III, ii, i
iv, ii, i, iii
iv, ii, iii, i
iv, i, iii, ii
ಈ ಕೆಳಗೆ ಕೊಟ್ಟಿರುವ ರಾಸಾಯನಿಕ ಕ್ರಿಯೆಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಯನ್ನು ಆಯ್ಕೆಮಾಡಿ.
3MnO4+4Al ---- 3Mn+2Al2O3.
a. ರಾಸಾಯನಿಕ ಕ್ರಿಯೆ ಬಹಿರುಷ್ಣಕ.
b. Al ಉತ್ಕರ್ಷಣೆ ಆಗಿ ವರ್ತಿಸುತ್ತದೆ.
c. MnO2 ಅಪಕರ್ಷಣೆ ಗೊಳ್ಳುತ್ತದೆ.d)Al Mn ಗಿಂತ ಹೆಚ್ಚು ಕ್ರಿಯಾಪಟುತ್ವ ಹೊಂದಿದೆ
a, c, d
a, b, c
a, b, d
a, b, c, d
X+Y---Z+SO2.
X+Z---Cu+SO2
X, Y,Z ಅನ್ನು ಗುರುತಿಸಿ
X Cu2O, Y H2SO4, Z Cu2S
X Cu2S, Y H2S, Z Cu2O
X Cu2S Y O2 Z Cu2O
X Cu2S, Y H2SO4, Z Cu2O
ಧಾತುಗಳ ಲೋಹಿಯ ಗುಣಗಳ ಆಧಾರದ ಮೇಲೆ ಸರಿಯಾದ ಕ್ರಮವನ್ನು ಗುರುತಿಸಿ
K>Na>Li>Mg
K>Na>Mg>Li
K>Mg>Na>Li
K>Li>Na>Mg
ಹೈಡ್ರೋಜನೀಕರಣ ಕ್ರಿಯೆಗೆ ಒಳಗಾಗದ ಸಂಯುಕ್ತಗಳು
C6H2, C4H2
C8H10, C3H12
C13H24, C14H28
C14H30, C5H12
ರಕ್ತನಾಳಗಳ ಕುರಿತ ಈ ಕೆಳಗಿನ ಹೇಳಿಕೆಗಳು ಸರಿಯಾಗಿವೆ.
A ಅಪಧಮನಿಗಳು ತೆಳುವಾದ ಮತ್ತು ಕಡಿಮೆ ಸ್ನಾಯುವಿನ ಬಿತ್ತಿ ಗೋಡೆಯನ್ನು ಹೊಂದಿವೆ.
B. ಅಭಿದಮನಿಗಳು ಭಿತ್ತಿಗಳು ಸ್ಥಿತಿಸ್ಥಾಪಕ ವಾಗಿಲ್ಲ.
C. ಅಪಧಮನಿಗಳು ತಮ್ಮ ಒಳಪದರಗಳಲ್ಲಿ ಕವಾಟಗಳನ್ನು ಹೊಂದಿಲ್ಲ.
D. ಅಭಿದಮನಿಗಳು ಖಾಲಿ ಇರುವಾಗ ಮುಚ್ಚಿಕೊಳ್ಳುವುದು ಇಲ್ಲ.
A&D
D ಮಾತ್ರ
B & C
A & C
ಕೆಳಗಿನ ಚಿತ್ರದಲ್ಲಿರುವ ಸಸ್ಯದಲ್ಲಿ ಉಂಟಾಗಬಹುದಾದ ಬದಲಾವಣೆಗಳು ಹೀಗಿರುತ್ತವೆ:
A ಕಾಂಡದ ತುದಿಯಲ್ಲಿ ಅಬ್ಸಿಸಿಕ್ ಆಮ್ಲ ಎಂಬ ಹಾರ್ಮೋನ್ ಉತ್ಪತ್ತಿಯಾಗುತ್ತದೆ.
B. ಯಾವಾಗ ಬೆಳಕು ಸಸ್ಯದ ಒಂದು ಕಡೆಯಿಂದ ಪಸರಿಸಲು ಪ್ರಾರಂಭವಾಗುತ್ತದೋ, ಆಕ್ಸಿನ್ ಸಸ್ಯದ ನೆರಳಿನ ಭಾಗದ ಕಡೆಗೆ ವಿಸ್ತರಣೆ ಗೊಳ್ಳುತ್ತದೆ.
C. ಅಬ್ಸಿಸಿಕ್ ಆಮ್ಲ ಜೀವಕೋಶಗಳು ಉದ್ದವಾಗಿ ಬೆಳೆಯಲು ಸಹಾಯ ಮಾಡುತ್ತದೆ.
D. ಬೆಳಕಿನಿಂದ ದೂರವಿರುವ ಕಾಂಡದ ಭಾಗದಲ್ಲಿರುವ ಜೀವಕೋಶಗಳು ಉದ್ದವಾಗಿ ಬೆಳೆಯುತ್ತವೆ.
ಸರಿಯಾದ ಆಯ್ಕೆಯನ್ನು ಆರಿಸಿ
A & B
B & C
C & D
B & D
ಬೆಳೆಯುತ್ತಿರುವ ಭ್ರೂಣವನ್ನು ಸಂರಕ್ಷಿಸುವ ದ್ರವ
ಕಚಕ ರಸಧಾತು
ಜಲರಸಧಾತು
ಎಂಡೋಲಿಂಫ್ ದ್ರವ
ಆಮ್ನಿಯೋಟಿಕ್ ದ್ರವ
ಅವಾಯುವಿಕ ಉಸಿರಾಟದಲ್ಲಿ ಬಿಡುಗಡೆಯಾಗುವ ಉಪಉತ್ಪನ್ನಗಳು
CO2, ನೀರು
ಆಲ್ಕೋಹಾಲ್
ನೀರು & ಶಕ್ತಿ
CO, ನೀರು
ಸಸ್ಯವೊಂದರ ಬೇರುಗಳು ಮಣ್ಣಿನಲ್ಲಿರುವ ನೈಟ್ರೇಟ್ ಸಾಂದ್ರತೆಯ ಪ್ರದೇಶ ದತ್ತ ಬೆಳೆಯುತ್ತಿದ್ದರೆ ಅದು.
ದ್ಯುತಿ ಅನುವರ್ತನೆ
ಜಲಾನುವರ್ತನೆ
ಸ್ಪರ್ಶಾನು ವರ್ತನೆ
ರಾಸಾಯನಿಕಾನು ವರ್ತನೆ
ಕೆಳಗಿನ ಸಂಯುಕ್ತಗಳಲ್ಲಿ ವಾಷಿಂಗ್ ಪೌಡರ್ ನ ಮುಖ್ಯ ಘಟಕ.
ಸೋಡಿಯಂ ಕ್ಲೋರೈಡ್
ಸೋಡಿಯಂ ಕಾರ್ಬೊನೇಟ್
ಸೋಡಿಯಂ ಪೌಡರ್
ಸೋಡಿಯಂ ಹೈಡ್ರಾಕ್ಸೈಡ್
ಪರಿಸರದಲ್ಲಿ ಜೈವಿಕ ಸಂವರ್ಧನೆ ಉಂಟು ಮಾಡುವ ವಸ್ತುಗಳು.
ಬೇಗನೆ ಮರುಚಕ್ರೀಕರಣ ಗೊಳ್ಳುತ್ತವೆ
ಮಣ್ಣಿನಲ್ಲಿ ಮಾತ್ರ ವಿಘಟನೆಗಳು ತ್ತವೆ
ಶಾಶ್ವತ ಅವಶೇಷಗಳಾಗಿ ಉಳಿಯುತ್ತವೆ
ಪೋಷಣಾಸ್ತರ ಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಸಂಗ್ರಹವಾಗುತ್ತವೆ.
ಫೆರಸ್ ಸಲ್ಫೇಟ್ ಹರಳುಗಳನ್ನು ಒಂದು ಶುಷ್ಕ ಕುದಿಗೋಳವೆಯಲ್ಲಿ ತೆಗೆದುಕೊಂಡು ಕಾಸಲಾಗಿದೆ, ಈ ರಾಸಾಯನಿಕ ಕ್ರಿಯೆಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ.
ಇದು ಬೆಳಕಿನ ವಿಭಜನೆ ಕ್ರಿಯೆಯಾಗಿದ್ದು ಬಿಳಿಬಣ್ಣದ ಫೆರ್ರಿಕ್ ಆಕ್ಸೈಡ್ ಉಂಟಾಗುತ್ತದೆ.
ಇದು ಉಷ್ಣ ವಿಭಜನೆಯಾಗಿದ್ದು ಹಸಿರುಬಣ್ಣದ ಧುಮಯುಕ್ತ ಫೆರ್ರಿಕ್ ಆಕ್ಸೈಡ್ ಉಂಟಾಗುತ್ತದೆ.
ಇದು ಬೆಳಕಿನ ವಿಭಜನೆ ಕ್ರಿಯೆಯಾಗಿದ್ದು ಕಂದುಬಣ್ಣದ ಫೆರ್ರಿಕ್ ಆಕ್ಸೈಡ್ ಉಂಟಾಗುತ್ತದೆ.
ಇದು ಉಷ್ಣ ವಿಭಜನೆ ಕ್ರಿಯೆಯಾಗಿದ್ದು ಕಂದುಬಣ್ಣದ ಫೆರ್ರಿಕ್ ಆಕ್ಸೈಡ್ ಉಂಟಾಗುತ್ತದೆ.
ಸಾಗಾಣಿಕೆಯಲ್ಲಿ ಪತ್ರರಂದ್ರಗಳ ಮಹತ್ವದ ಪಾತ್ರವೆಂದರೆ
ಮೇಲ್ಮುಖ ಸೆಳೆತವನ್ನು ಸೃಷ್ಟಿಸುವುದು
ಕಾರ್ಬನ್ ಡೈ ಆಕ್ಸೈಡನ್ನು ಹೀರುವುದು
ಆಕ್ಸಿಜನ್ ಬಿಡುಗಡೆ ಮಾಡುವುದು
ನಿರಂತರ ಬಾಷ್ಪ ವಿಸರ್ಜನೆ ಮಾಡುವುದು
ಪ್ರೋಪೆನ್ ನ ಒಂದು ಹೈಡ್ರೋಜನ್ ಪರಮಾಣುವನ್ನು ಕೀಟೋನ್ ಗುಂಪಿನಿಂದ ಪಲ್ಲಟಗೊಳಿಸಿ ದಾಗ ಉಂಟಾಗುವ ಸಂಯುಕ್ತ ಅಣುಸೂತ್ರ
C4H8O
C3H8O
C3H6O2
C4H10O
ಸಮತಟ್ಟಾದ ಭೂ ಪ್ರದೇಶಗಳಲ್ಲಿ ಖಾದಿನ್ ಒಡ್ಡುಗಳನ್ನು ನಿರ್ಮಿಸುವುದರಿಂದ
ಅಂತರ್ಜಲ ಮಟ್ಟವು ಕಡಿಮೆಯಾಗುತ್ತದೆ
ಅಂತರ್ಜಲಮಟ್ಟ ಹೆಚ್ಚುತ್ತದೆ
ಅಂತರ್ಜಲವು ಮಲಿನವಾಗುತ್ತದೆ
ಸಮೀಪ ಪ್ರದೇಶದ ಸಸ್ಯಗಳ ಅಧಿಕ ತೇವಾಂಶದಿಂದ ನಶಿಸುತ್ತವೆ
ಒಂದು ಧಾತುವಿನ ಎಲೆಕ್ಟ್ರಾನ್ ವಿನ್ಯಾಸ 2, 8, 8, 1 & ಇನ್ನೊಂದು ಧಾತುವಿನ ಎಲೆಕ್ಟ್ರಾನ್ ವಿನ್ಯಾಸ 2, 8, 7 ಆಗಿದೆ ಹಾಗಾದರೆ ಈ ಧಾತುಗಳ ನಡುವೆ ಉಂಟಾಗುವ ಬಂದ.
ಕೋವಲೆoಟ್ ಬಂಧ
ಹೈಡ್ರೋಜನ್ ಬಂಧ
ಲೋಹಿಯ ಬಂಧ
ಆಯಾನಿಕ ಬಂಧ.
ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡುವಾಗ ಕಣ್ಣಿನಲ್ಲಿ ಉಂಟಾಗುವ ಬದಲಾವಣೆ.
ಕಣ್ಣಿನ ಮಸೂರದ ಸಂಗಮದೂರ ಕಡಿಮೆಯಾಗುತ್ತದೆ
ಕಣ್ಣಿನ ಮಸೂರದ ವಕ್ರತೆ ಹೆಚ್ಚಾಗುತ್ತದೆ
ಕಣ್ಣಿನ ಮಸೂರದ ಸಂಗಮದೂರ ಹೆಚ್ಚಾಗುತ್ತದೆ
ಕಣ್ಣಿನ ಸಿಲಿಯರಿ ಸ್ನಾಯುಗಳು ಕುಗ್ಗುತ್ತವೆ.
ಪ್ರೊ ಪೇನಲ್ ಮತ್ತು ಪ್ರೊಪೆನ್ಯಾಲ್ ಗಳಲ್ಲಿರುವ ಕ್ರಿಯಾಗುಂಪುಗಳು ಕ್ರಮವಾಗಿ
-OH, -CHO
-OH, -COOH
-CHO, - COOH
-CHO, -CO
Explore all questions with a free account